ಪಬ್ಲಿಕ್ ಅಲರ್ಟ್ ನ್ಯೂಸ್ :-ಜೇನುಗೂಡು ಸೇವಾ ಸಮಿತಿಯಿಂದ ಶ್ರೀ ಚಾಮುಂಡೇಶ್ವರಿ ಪೂಜಾ ಮಹೋತ್ಸವ
ತಾಯಿ ಚಾಮುಂಡೇಶ್ವರಿ ಕೃಪೆಯಿಂದ ನಾಡಿನ ಜನರಿಗೆ ಸಕಲ ಸೌಕರ್ಯ ದೊರಕಲಿ: ಶಾಸಕ ಜಿ.ಟಿ.ದೇವೇಗೌಡ
ಮೈಸೂರು: ತಾಯಿ ಚಾಮುಂಡೇಶ್ವರಿ ಕೃಪೆಯಿಂದ ನಾಡಿನ ಜನರಿಗೆ ಸಕಲ ಸೌಕರ್ಯಗಳು ದೊರಕಲಿ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಮೈಸೂರಿನ ವಿಜಯನಗರದ ೪ನೇ ಹಂತದದಲ್ಲಿನ ಶ್ರೀಮತಿ ರಾಧಾ ಸಂದೀಲ್ರವರ ಜೇನುಗೂಡು ಸೇವಾ ಸಮಿತಿ ವತಿಯಿಂದ ಆಷಾಢs ಶುಕ್ರವಾರದಂದು ಏರ್ಪಡಿಸಿದ್ದ ಶ್ರೀ ಚಾಮುಂಡೇಶ್ವರಿಯ ೧೮ನೇ ವರ್ಷದ ಪೂಜಾ ಮಹೋತ್ಸವದಲ್ಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮಹಿಳಾ ಕಾಂಗ್ರೆಸ್ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಾಲಾ ಮಹೇಂದ್ರ ಹಾಗೂ ಜೇನುಗೂಡು ಸೇವಾ ಸಮಿತಿ ಸಂಸ್ಥಾಪಕರಾದ ರಾಧಾ ಸಂದೀಲ್ರವರ ನೇತೃತ್ವದಲ್ಲಿ ನಾಡಿನ ಜನರಿಗೆ ಆಯುಷ್ಯ, ಆರೋಗ್ಯ, ಸುಖ ಸಂತೋಷ ನೀಡಲೆಂದು ಕಳೆದ ೧೮ ವರ್ಷಗಳಿಂದ ಆಷಾಢs ಮಾಸದ ಶ್ರೀ ಚಾಮುಂಡೇಶ್ವರಿ ಪೂಜಾ ಮಹೋತ್ಸವ ನಿರಂತವಾಗಿ ನಡೆದುಕೊಂಡು ಬರುತ್ತಿದ್ದು, ಇದು ೧೮ನೇ ವರ್ಷದ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆಯುತ್ತಿರುವುದು ಬಹಳ ಸಂತೋಷದ ವಿಷಯ. ನಾಡಿನಲ್ಲಿ ಮಳೆಯ ಕೊರತೆಯಿಂದ ಕುಡಿಯುವ ನೀರಿಗೂ ಅಭಾವ ಉಂಟಾಗಿತ್ತು. ಆದರೆ ಈ ಆಷಾಢ ಮಾಸದಲ್ಲಿ ನಡೆಯುವ ಪೂಜಾ ಪುರಸ್ಕಾರಗಳಿಂದ ಶ್ರೀ ಚಾಮುಂಡೇಶ್ವರಿ ಕೃಪೆಯಿಂದ ಹಲವೆಡೆ ಮಳೆಯಾಗಿ ಕಬಿನಿ ಹಾಗೂ ಕೆಆರ್ಎಸ್ ತುಂಬುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಮಾಲಾ ಮಹೇಂದ್ರ ಹಾಗೂ ರಾಧಾ ಸಂದೀಲ್ವರ ಸಮಾಜಮುಖಿ ಕಾರ್ಯಕ್ರಮಗಳು ನಿಜಕ್ಕೂ ಶ್ಲಾಘನೀಯ. ಇವರು ತಮ್ಮ ಈ ಪೂಜಾ ಕಾರ್ಯಕ್ರಮದಲ್ಲಿ ಅದರಲ್ಲೂ ಮಹಿಳೆಯರಿಗೆ ವಿಶೇಷವಾಗಿ ಬಾಗೀನ ಅರ್ಪಿಸುತ್ತಿರುವುದು ಅವರ ಮಾನವೀಯತೆ ಹಾಗೂ ಸಮಾಜಸೇವಾ ಮನೋಭಾವನೆಯನ್ನು ಗುರುತಿಸುತ್ತದೆ ಎಂದು ಶ್ಲಾಘಿಸಿದ ಅವರು, ಭಾನುವಾರವೂ ಸಮಿತಿ ವತಿಯಿಂದ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಿರುವುದು ಮೆಚ್ಚುವಂತದ್ದು. ಇಂತಹ ಅದ್ಧೂರಿ ಹಾಗೂ ಸಮಾಜಮುಖಿ ಪೂಜಾ ಕಾರ್ಯಕ್ರಮಕ್ಕೆ ನನ್ನನ್ನು ಕರೆದು ಶ್ರೀ ಚಾಮುಂಡೇಶ್ವರಿ ಕೃಪೆಗೆ ಪಾತ್ರರಾಗಲು ಅನುವು ಮಾಡಿಕೊಟ್ಟಿದ್ದಾರೆ. ನಾಡಿನ ಸಮಸ್ತ ಜನತೆಗೆ ತಾಯಿ ಚಾಮುಂಡೇಶ್ವರಿ ಅಮ್ಮ ಆಯುರ್ಆರೋಗ್ಯ, ಸಕಲ ಸೌಭಾಗ್ಯವನ್ನು ನೀಡಲೆಂದು ಕೇಳಿಕೊಳ್ಳುತ್ತೇನೆ. ಇಂತಹ ಕಾರ್ಯಕ್ರಮವನ್ನು ನಡೆಸುತ್ತಿರುವ ಮಾಲಾ ಮಹೇಂದ್ರ ಹಾಗೂ ರಾಧ ಅವರ ಭವಿಷ್ಯ ಉಜ್ವಲವಾಗಲೆಂದು ಹಾರೈಸುತ್ತೇನೆ ಎಂದರು.
ಇದೇ ಕಾರ್ಯಕ್ರಮದಲ್ಲಿ ಬಸವಮಾರ್ಗ ಫೌಂಡೇಷನ್ನ ಸಂಸ್ಥಾಪಕರಾದ ಬಸವರಾಜು ಅವರು ಕಾರ್ಯಕ್ರಮದಲ್ಲಿ ಭಾವಹಿಸಿ ಮಾತನಾಡಿ, ಮಾಲಾ ಮಹೇಂದ್ರ ಹಾಗೂ ರಾಧಕ್ಕ ಅವರು ಜೇನುಗೂಡು ಸೇವಾ ಸಮಿತಿಯಿಂದ ಕಳೆದ ೧೮ ವರ್ಷಗಳಿಂದ ಆಷಾಢಮಾಸದಲ್ಲಿ ತಾಯಿ ಚಾಮುಂಡೇಶ್ವರಿ ಪೂಜಾ ಮಹೋತ್ಸವವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ನಾನು ಮೈಸೂರಿನ ಹಲವಾರು ಕಡೆ ಇಂತಹ ಪೂಜಾ ಕಾರ್ಯಕ್ರಮ ನೋಡಿದ್ದೇನೆ. ಆದರೆ ಇವರಷ್ಟು ಅದ್ಧೂರಿಯಾಗಿ ವಿಶೇಷವಾಗಿ ಯಾರೂ ನಡೆಸುವುದಿಲ್ಲ. ಇವರ ಕಾರ್ಯಕ್ರಮ ನಿಜಕ್ಕೂ ಮಿನಿ ದಸರಾ ನೋಡಿದಂತೆ ಆಗುತ್ತದೆ. ಉತ್ತಮ ವಾದ ಲೈಂಟಿಂಗ್ ವ್ಯವಸ್ಥೆ ಇಲ್ಲಿಗೆ ಹರಿದು ಬರುವ ಭಕ್ತಸಾಗರ ನೋಡಿದರೆ ಮೈಸೂರು ದಸರಾ ನೆನಪಾಗುತ್ತದೆ. ಇಂತಹ ಕಾರ್ಯಕ್ರಮವನ್ನು ನಡೆಸಿಕೊಂಡು ಬರುವ ಮಾಲಾ ಮಹೇಂದ್ರ ಹಾಗೂ ರಾಧಾ ಅವರಿಗೆ ರಾಜಕೀಯದಲ್ಲಿ ಉನ್ನತ ಸ್ಥಾನ ದೊರಕಲಿ ಎಂದು ಆಶಿಸುತ್ತೇನೆ ಎಂದರು.
ವಿಜಯನಗರದದ ನಾಲ್ಕನೇ ಹಂತದಲ್ಲಿ ಜೇನುಗೂಡು ಸಏವಾ ಸಮಿತಿಯಿಂದ ಶುಕ್ರವಾರ ಸಂಜೆ ೭ಗಂಟೆಯಲ್ಲಿ ತಾಯಿ ಚಾಮುಂಡೇಶ್ವರಿ ಅಮ್ಮನವರ ಪ್ರತಿಷ್ಠಾಪನೆ ಹಾಗೂ ಭಕ್ತರಿಗೆ ಪ್ರಸಾದ ವಿತರಣೆಯನ್ನೂ ಸಹ ಆಯೋಜನೆ ಮಾಡಲಾಗಿತ್ತು. ಶನಿವಾರ ಸಂಜೆ೭ ಗಂಟೆಯಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು.
ಇಂದು ಅಂದರೆ ಭಾನುವಾರ ಮಧ್ಯಾಹ್ನ ೧ ಗಂಟೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಜೇನುಗೂಡು ಸೇವಾ ಸಮಿತಿಯ ಮುಖಂಡರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಾಲಮಹೆಂದ್ರ, ಸಂಸ್ಥಾಪಕರು ಜೇನುಗೂಡು ಸೇವಾ ಸಮಿತಿ ಶ್ರೀಮತಿ ರಾಧಾ ಸಂದೀಲ್, ಹರಿಹರನ್ ಕನ್ಸ್ಟ್ರಕ್ಷನ್ ಮಾಲೀಕರಾದ ಮುತ್ತುರಾಜು, ಪ್ರೆಂಡ್ಲಿ ಜಿಮ್ ಮಾಲೀಕರಾದ ನತೀಶ್ಗೌಡ ಮತ್ತು ನವೀಶ್ಗೌಡ ಹಾಗೂ ಕೃತಿಕ್ಗೌಡ, ಯಾತ್ರೇಶ್ಗೌಡ, ನಾಗೇಶ್ಗೌಡ ಮತ್ತು ರಾಕೇಶ್ಗೌಡ ಮತ್ತಿತರರು ಹಾಜರಿದ್ದರು.
