ಪಬ್ಲಿಕ್ ಅಲರ್ಟ್ ನ್ಯೂಸ್:-ವಿಶೇಷ ಮಕ್ಕಳೊಂದಿಗೆ ಜನುಮ ದಿನಾಚರಣೆ
ಮೈಸೂರು: ಸಮಾಜ ಸೇವಕರಾದ ಉಮೇಶ್ ಸಿ.ಅವರು ತಮ್ಮ
ಜನುಮ ದಿನವನ್ನು ವಿಶೇಷ ಮಕ್ಕಳೊಂದಿಗೆ ವಿಶಿಷ್ಟವಾಗಿ,
ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಇಲ್ಲಿನ ಚಾಮುಂಡಿಪುರಂ ನಲ್ಲಿ ಇರುವ ಅರುಣೋದಯ ವಿಶೇಷ ಮಕ್ಕಳ ಶಾಲೆಯಲ್ಲಿ ಕೇಕ್ ಕತ್ತರಿಸಿ, ಅಲ್ಲಿನ ಮಕ್ಕಳಿಗೆ ಉಪಹಾರ ಹಾಗೂ ಭೋಜನದ ವ್ಯವಸ್ಥೆ ಕಲ್ಪಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಈ ವೇಳೆ ಮಾತನಾಡಿದ ಉಮೇಶ್ ಅವರು, ವಿಶೇಷ ಮಕ್ಕಳು ಎಂದರೇ ದೇವರ ಮಕ್ಕಳು ಎಂದು ಕರೆಯಲಾಗುತ್ತದೆ.ಅಂತಹ ಮಕ್ಕಳೊಂದಿಗೆ ಜನುಮ ದಿನವನ್ನು ಹಲವು ಸಾಮಾಜಿಕ ಕಾರ್ಯಗಳೊಂದಿಗೆ ಆಚರಿಸಿಕೊಳ್ಳುತ್ತಿರುವುದು ನನ್ನ ಪುಣ್ಯವೇ ಸರಿ ಎಂದರು.
ಕಳೆದ ಹಲವು ವರ್ಷಗಳಿಂದಲೂ ಇದೇ ರೀತಿ ವಿವಿಧ ಆಶ್ರಮ, ವೃದ್ದಾಶ್ರಮ ಸೇರಿದಂತೆ ವಿಶೇಷ ಮಕ್ಕಳಿರುವ ಸ್ಥಳಗಳಲ್ಲಿ ತಮ್ಮ ಹುಟ್ಟುಹಬ್ನವನ್ನು ಆಚರಿಸಿಕೊಳ್ಳುತ್ತಿದ್ದೇನೆ.
ಹಾಗೂ ವಿಶೇಷ ಮಕ್ಕಳ ನೆರವಿಗೆ ಅಗತ್ಯವಿರುವ ಸಹಾಯವನ್ನು ಮಾಡುತ್ತಿದ್ದೇನೆ.ಮುಂದಿನ ದಿನಗಳಲ್ಲೂ ಈ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಲಕ್ಷ್ಮೀಪತಿ ಬಾಲಾಜಿ, ತಿಲಕ್ ಕುಮಾರ್,ರವಿ, ಪ್ರಸನ್ನ, ಶಾಂಸುಂದರ್, ಪ್ರಭು, ನಂದನ್, ಸುಮಂತ್ ಇನ್ನಿತರರು ಉಪಸ್ಥಿತರಿದ್ದರು.
