ಪಬ್ಲಿಕ್ ಅಲರ್ಟ್ ನ್ಯೂಸ್:-ಗುಲ್ಷನ್ ಎ ಇಫ್ತಿಖಾರ್ ಚಾರಿಟೇಬಲ್ ಟ್ರಸ್ಟ್ ಸಾಮಾಜಿಕ ಕಾರ್ಯಕ್ರಮಕ್ಕೆ ಹೆಜ್ಜೆ
ಮೈಸೂರು: ಪ್ರಸ್ತುತ ವಿದ್ಯಮಾನಗಳಲ್ಲಿ ಆರೋಗ್ಯವೇ ಮಹಾ ವರದಾನವಾಗಿದ್ದು ಆದರೆ ಆರೋಗ್ಯದ ವಿವಿಧ ಸಮಸ್ಯೆಯಿಂದ ನರಳುತ್ತಿರುವುದೇ ಜನ ಸಾಮಾನ್ಯರೇ ಹೆಚ್ಚು ಆದ್ದರಿಂದ ಈ ಒಂದು ವಿಷಯವನ್ನು ಪರಿಗಣಿಸಿ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಗುಲ್ಷನ್ ಎ ಇಫ್ತಿಖಾರ್ ಚಾರಿಟೇಬಲ್ ಟ್ರಸ್ಟ್ ಚೇರ್ಮನ್ ಮೌಲಾನಾ ಶೇಕ್ ರಜ್ಜಾಬ್ ಆಲಿ ವಿವರಿಸಿದರು.
ಮೈಸೂರು ನಗರದ ರಿಂಗ್ ರಸ್ತೆ ಮಣಿಪಾಲ್ ಆಸ್ಪತ್ರೆಯ ಸಮೀಪ ವಿರುವ ಗುಲ್ಷನ್ ಎ ಇಫ್ತಿಖಾರ್ ಚಾರಿಟೇಬಲ್ ಟ್ರಸ್ಟಿನ ಸಭಾಂಗಣದಲ್ಲಿ ಆಯೋಜಿಸಿದ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರಕ್ಕೆ ಪ್ರಾರ್ಥನೆಯ(ದುವಾ) ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮಧ್ಯಮ ವರ್ಗ ಮತ್ತು ಕಡು ಬಡವರ್ಗದ ಜನಸಾಮಾನ್ಯರು ವಿವಿಧ ರೀತಿಯ ಕಾಯಿಲೆಗಳಿಂದ ನರಳುತ್ತಿದ್ದಾರೆ ಅವರಿಗೋಸ್ಕರ ಇಂದು ಒಂದು ಆರೋಗ್ಯ ತಪಾಸಣೆಯ ಜೊತೆಗೆ ಔಷಧ ಉಪಚಾರಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ ವಿಶೇಷವಾಗಿ ಗುಲ್ಷನ್ ಎ ಇಫ್ತಿಖಾರ್ ಚಾರಿಟೇಬಲ್ ಟ್ರಸ್ಟಿನ ಚೇರ್ಮನ್ ಹಾಗೂ ನಿರ್ದೇಶಕರುಗಳು ಒಳಗೊಂಡಂತೆ ರಕ್ತ ದಾನವನ್ನು ಮಾಡಿ ಈ ಶಿಬಿರಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು ಎಂದರು.
ಈ ಆರೋಗ್ಯ ಶಿಬಿರಕ್ಕೆ ಎಂ.ಎಂ. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಹಾಗೂ ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ರಕ್ತ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಸಹಕಾರದಿಂದ ಯಶಸ್ವಿಯಾಗಿ ಮಾಡಿದ ಎಲ್ಲರಿಗೂ ಗುಲ್ಷನ್ ಎ ಇಫ್ತಿಖಾರ್ ಚಾರಿಟೇಬಲ್ ಟ್ರಸ್ಟಿನ ಚೇರ್ಮನ್ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ದಾರೂಲ್ ಉಲೂಮ್ ದೇಬಂದ್ ಮೌಲಾನಾ ಅಬ್ದುಲಾ ಮಾರೂಫೀ ಸಾಹೇಬ್, ಮೌಲಾನಾ ಯಾಖುಬ್ ಖಾಸ್ಮಿ, ಶಬ್ನಂ ಸಾಯಿದ್, ಶುಯೇಬ್, ಖಲೀಲ್ ಸಾಹೇಬ್, ಅಬ್ದುಲ್ ಖಾದಿರ್, ಹಿದಯಾತ್ ಉಲ್ಲಾ, ಮೌಲಾನಾ ಸಾಜೀದ್ ಖಾಸ್ಮಿ, ಮೌಲಾನಾ ಸಾದಿಕ್ ರಶಾದಿ, ಹಬೀಬೂರ್ ರೆಹಮಾನ್, ಜಿಲ್ಲಾ ಆರ್.ಸಿ.ಹೆಚ್.ಓ ಡಾ.ಶಿರಾಜ್ ಅಹಮದ್, ಎಂ.ಎಂ.ಆಸ್ಪತ್ರೆಯ ವೈದ್ಯೆ ಡಾ.ಲಾಯಿಖಾ ಅಹಮ್ಮದಿ, ಜೀವಧಾರ ರಕ್ತ ಸೆಂಟರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
